Poem
#ನಾನೇನನಾನೇನ ಮಾಡಿದೆನೋ ರಂಗಯ್ಯ ರಂಗ ನೀ ಎನ್ನ ಕಾಯಬೇಕೋ
by Purandara Dasa · 1484–1564
Submitted by Rajeev Joshiಕಲ್ಯಾಣಾದ್ಬುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ|
ಶ್ರೀಮದ್ ವೆಂಕನಾಥಾಯ| ಶ್ರೀನಿವಾಸಾಯತೇ ನಮಃ||
ನಾನೇನ ಮಾಡಿದೆನೋ ರಂಗಯ್ಯ ರಂಗ ನೀ ಎನ್ನ ಕಾಯಬೇಕೋ ॥ ಪ ॥
ಮಾನಾಭಿಮಾನವು ನಿನ್ನದು ಎನಗೇನು ||
ದೀನರಕ್ಷಕ ತಿರುಪತಿಯ ವೆಂಕಟರಮಣ ॥ಅ.ಪ ॥
ರಕ್ಕಸೂದನನೆ ಕೇಳು||
ಧ್ರುವರಾಯ
ಚಿಕ್ಕವನಲ್ಲವೇನೋ||
ಉಕ್ಕಿಬರುವ ಕರ್ಮ ಮಾಡಿದ ಅಜಮಿಳ||
ನಿನ್ನಕ್ಕನ ಮಗನೇನೋ ॥ ೧ ||
ಒಪ್ಪಿಡಿ ಅವಲಕ್ಕಿಯ||
ತಂದವನಿಗೆ ಒಪ್ಪುವಂತೆ ಕೊಡಲಿಲ್ಲವೆನೋ||
ಸರ್ಪಶಯನ ಶ್ರೀ ಪುರಂದರ ವಿಠಲ||
ಅಪ್ರಮೇಯ ಕಾಯೋ ॥ ೨ ॥
Kalyāṇādbutagātrāya kāmitārtha pradāyinē|
śrīmad veṅkanāthāya| śrīnivāsāyatē namaḥ||
nānēna māḍidenō raṅgayya raṅga nī enna kāyabēkō॥ pa॥
mānābhimānavu ninnadu enagēnu ||
dīnarakṣaka tirupatiya veṅkaṭaramaṇa॥a.Pa॥
rakkasūdanane kēḷu||
dhruvarāya
cikkavanallavēnō||
ukkibaruva karma māḍida ajamiḷa||
ninnakkana maganēnō॥ 1 ||
oppiḍi avalakkiya||
tandavanige oppuvante koḍalillavenō||
sarpaśayana śrī purandara viṭhala||
apramēya kāyō॥ 2॥
0
Sign in to like and bookmark.