Poem
Poem

ನಾರಾಯಣ ನಿನ್ನ ನಾಮದ ಸ್ಮರಣೆ

ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ || ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೂ ಮತಿಗೆಟ್ಟು ಇರಲಿ ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ ಅಷ್ಟಾಕ್ಷರ ಮಹಾ ಮಂತ್ರದ ನಾಮವ ||1|| ಸಂತತ ಹರಿ ನಿನ್ನ ಸಾಸಿರ ನಾಮವ ಅಂತರಂಗದ ಒಳಗಿರಿಸಿ ಎಂತೋ ಪುರಂದರ ವಿಠಲ ರಾಯನ ಅಂತ್ಯ ಕಾಲದಲ್ಲಿ ಚಿಂತಿಸೋ ಹಾಂಗೆ ||2||
0

Sign in to like and bookmark.

Discussion

Ask about this

No questions yet. Start the discussion.